ಶಿವಮೊಗ್ಗ: ಬಸವಪುರ ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷ: ಭತ್ತದ ಬೆಳೆ ನಾಶ
ಶಿವಮೊಗ್ಗ ತಾಲೂಕಿನ ಬಸವಪುರ ಗ್ರಾಮದ ಕಾಡಂಚಿನ ಪ್ರದೇಶಗಳಲ್ಲಿ ಭತ್ತದ ಬೆಳೆಗಳನ್ನ ಕಾಡಾನೆ ರಾತ್ರಿ ವೇಳೆ ಬಂದು ನಾಶ ಮಾಡುತ್ತಿರುವ ಕುರಿತಾದ ಮಾಹಿತಿ ಲಭ್ಯವಾಗಿದೆ. ಶನಿವಾರ ರಾತ್ರಿ ಕೂಡ ಬಸವಪುರ ಗ್ರಾಮದ ಭತ್ತದ ಗದ್ದೆಗೆ ಕಾಡಾನೆ ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ನಾಶ ಮಾಡಿದೆ. ಇನ್ನಾ ಆನೆಗಳನ್ನ ಓಡಿಸಲು ರೈತರು ಪಂಜನ್ನು ಹಿಡಿದು ಗದ್ದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಗಳ ಕಾಟವನ್ನು ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ ಈ ಕುರಿತಾದ ಮಾಹಿತಿಯು ಭಾನುವಾರ ಲಭ್ಯವಾಗಿದೆ.