ಬೆಂಗಳೂರು ಉತ್ತರ: ವ್ಯವಸ್ಥಿತ ರಸ್ತೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ - ಆನೆಪಾಳ್ಯದಲ್ಲಿ ರಾಜೇಂದ್ರ ಚೋಳನ್ ಸೂಚನೆ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆನೇಪಾಳ್ಯ ಮುಖ್ಯರಸ್ತೆ ತುಂಬಾ ಹಾಳಾಗಿದ್ದು, ಅದಕ್ಕೆ ವೆಟ್ ಮಿಕ್ಸ್ ಬಳಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲಕರವಾಗುವಂತೆ ಕ್ರಮವಹಿಸಲು ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೆಪ್ಟೆಂಬರ್ 24ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ನಗರ ಪಾಲಿಕೆಯಲ್ಲಿ ವೈಟ್ ಟಾಪಿಂಗ್ ರಸ್ತೆಗಳು ಹಾಗೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರಸ್ತೆ ಹಾಳಾದ ಭಾಗಗಳಿಗೆ ವೆಟ್ ಮಿಕ್ಸ್ ಹಾಗೂ ಡಾಂಬರೀಕರಣ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥಿತ ರಸ್ತೆ ನಿರ್ಮಿಸುವಂತೆ ಸೂಚನೆ ನೀಡಿದರು.