ಮಳವಳ್ಳಿ: ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದ ರಸಮ್ಮನಿಗೆ ವಿಶೇಷ ಪೂಜೆ, ನಿಶ್ಚಲಾನಂದನಾಥಸ್ವಾಮೀಜಿ ಭಾಗಿ
ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಗುಂಡಾಪುರ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಆರಾಧ್ಯ ದೇವತೆಯಾದ ಬೆಟ್ಟದ ರಸಮ್ಮ ಹಾಗೂ ನಡುಕೇರಿ ವೀರಭದ್ರ ದೇವಸ್ಥಾನದಲ್ಲಿ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ಶ್ರೀ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದ ನಾಥಸ್ವಾಮೀಜಿ ಅವರು ಸಂಜೆ 7 ಗಂಟೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಮೃದ್ಧಿಯಾಗಿ ಮಳೆ ಆಗಬೇಕಾದರೆ ದೇವರ ಆಶೀರ್ವಾದ ಇರಬೇಕಾಗಿದೆ. ಅದಕ್ಕಾಗಿ ಗುಂಡಾಪುರದ ಬೆಟ್ಟದರಸಮ್ಮ ಮತ್ತು ಹಲಗೂರು ನಡಕೇರಿ ವೀರಭದ್ರ ಸ್ವಾಮಿ ದೇವರುಗಳ ಆಶೀರ್ವಾದದಿಂದ ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗಿ ರೈತರ ಬದುಕಿನಲ್ಲಿ ಹರ್ಷ ತುಂಬಲಿ ಎಂದು