ಚಳ್ಳಕೆರೆ: ಗೌರಸಮುದ್ರದಲ್ಲಿ ಗುರುವಾರದಂದು ಬೊಮ್ಮ ಲಿಂಗೇಶ್ವರ ಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ವೈಭವದಿಂದ ನಡೆಯಿತು. ಪ್ರಸಿದ್ಧ ಗೌಸಂದ್ರ ಮಾರಮ್ಮದೇವಿ ಸಹೋದರನಾದ ಬೊಮ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನವನ್ನು ಜೀರ್ಣಾದ್ಧಾರ ಮಾಡಲಾಗಿದೆ. ಅಂಗವಾಗಿ ಮಂಗಳವಾರ ಮಾರಮ್ಮ, ಬೊಮ್ಮಲಿಂಗೇಶ್ವರ ಮತ್ತು ಮಾತೆಂಗಮ್ಮ ದೇವರುಗಳ ಉತ್ಸವ ಮೂರ್ತಿಗಳನ್ನು ಗಂಗಾಪೂಜೆಗೆ ಕರೆದುಕೊಂಡು ಹೋಗಲಾಗಿತ್ತು. ಸಂಜೆ ವಾಪಾಸ್ ಬಂದ ನಂತರ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬುಧವಾರ ಗೋಪೂಜೆ, ನವಗ್ರಹ ಪೂಜೆ, ವಾಸ್ತುಪೂಜೆ ನಡೆದವು.