ಹುಮ್ನಾಬಾದ್: ನ. 21ಕ್ಕೆ ಮಾಣಿಕನಗರದಲ್ಲಿ ನಡೆಯುವ ರಾಷ್ಟೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿವಿಧ ದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳು
Homnabad, Bidar | Nov 20, 2025 ಹತ್ತಿರದ ಮಾಣಿಕನಗರದಲ್ಲಿ ಮಾಣಿಕಪ್ರಭು ಶಿಕ್ಷಣ ಸಮಿತಿ ವತಿಯಿಂದ ನ. 21ಕ್ಕೆ ಆಯೋಜಿಸಿರುವ ದ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಅನೇಕ ಶಾಲೆಗಳ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಗುರುವಾರ ಸಂಜೆ 6:15ಕ್ಕೆ ಮಾಣಿಕನಗರಕ್ಕೆ ಬಂದು ಇಳಿದಿದ್ದಾರೆ. ಬಂದ ಎಲ್ಲರನ್ನು ಮಾಣಿಕಪ್ರಭು ಶಿಕ್ಷಣ ಸಮಿತಿಯ ಅಧ್ಯಕ್ಷ ಆನಂದರಾಜ ಪ್ರಭು ಅವರು ಸ್ವಾಗತಿಸಿ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಜಪಾನ್, ಅಮೆರಿಕ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಆಗಮಿಸಿದ್ದಾರೆ.