ಚಿತ್ರದುರ್ಗ: ನಗರದಲ್ಲಿಂದು ಪಾರ್ಶ್ವನಾಥ ಜಯಂತಿ ಹಿನ್ನೆಲೆ ಭವ್ಯ ಮೆರವಣಿಗೆ
ಚಿತ್ರದುರ್ಗದಲ್ಲಿಂದು ಪಾರ್ಶ್ವನಾಥ ಜಯಂತಿ ಹಿನ್ನೆಲೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗದ ಜೈನರ ದೇವಸ್ಥಾನದಿಂದ ಕೋಟೆ ರಸ್ತೆ ನಗರದ ಗಾಂಧಿ ವೃತ್ತದಿಂದ ಪ್ರಮುಖ ಬೀದಿಗಳಾದ ಬಿಡಿ ರಸ್ತೆ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತ ರಂಗಯ್ಯನ ಬಾಗಿಲು ದೊಡ್ಡ ಪೇಟೆ ಚಿಕ್ಕಪೇಟೆ ಮೂಲಕ ಪಾರ್ಶ್ವ ನಾಥ ದೇವಾಲಯಕ್ಕೆ ಮೆರವಣಿಗೆ ತಲುಪಿತು. ಪಾರ್ಶ್ವನಾಥ ದೇವರ ಭಾವಚಿತ್ರವನ್ನು ಟ್ರ್ಯಾಕ್ಟರ್ ನಲ್ಲಿ ಕೂರಿಸಿ, ಅದ್ದೂರಿ ಮೆರವಣಿಗೆ ಮಾಡಲಾಯಿತು