ಮುಧೋಳ: ಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕುವ ತಂತ್ರಗಾರಿಕೆ ನಡೆಯುತ್ತಿದೆ,ನಗರದಲ್ಲಿ ರೈತ ಮುಖಂಡ ವೀರಣ್ಣ ಹಂಚಿನಾಳ
ಕಬ್ಬು ಬೆಳೆಗಾರರ ಹೋರಾಟ ಹತ್ತಿಕ್ಕುವ ತಂತ್ರಗಾರಿಕೆ ಹಿನ್ನೆಲೆ ರೈತರ ಮೇಲೆ ಎಫ್.ಐ,ಆರ್ ದಾಖಲಿಸಿದ್ದಾರೆಂದು ರೈತ ಮುಖಂಡ ವೀರಣ್ಣ ಹಂಚಿನಾಳ ಅವರು ಆರೋಪಿಸಿದ್ದಾರೆ. ಮುಧೋಳ ನಗರದಲ್ಲಿ ಮಾತನಾಡಿರುವ ಅವರು,ರೈತರ ಮೇಲೆ ದಾಖಲು ಮಾಡಿರುವ ಕೇಸ್ ವಾಪಸ್ಸು ಪಡೆಯಬೇಕು.ನೀವು ಅರೆಸ್ಟ ಮಾಡೋದಾದ್ರೆ ನಾವೆಲ್ಲ ರೈತರು ಜೈಲಿಗೆ ಹೋಗಲು ರೆಡಿ ಇದ್ದೇವೆ ಎಂದು ಹೇಳಿದ್ದಾರೆ.