ಬಳ್ಳಾರಿ: ಎಸ್ಪಿ ಶೋಭಾರಾಣಿ ಹೆಸರಿನಲ್ಲಿ ನಕಲಿ ಖಾತೆ : ಸಾರ್ವಜನಿಕರಿಗೆ ಎಚ್ಚರಿಕೆ
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರ ಹೆಸರನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ (ಫೇಕ್) ಖಾತೆಗಳು ತೆರೆದಿರುವ ಘಟನೆ ನ.20, ಗುರುವಾರ ಬೆಳಿಗ್ಗೆ 9ಗಂಟೆಗೆ ಬೆಳಕಿಗೆ ಬಂದಿದೆ. ಈ ಕುರಿತು ಸ್ವತಃ ಎಸ್ಪಿ ಶೋಭಾರಾಣಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿ, “ನನ್ನ ಹೆಸರಿನಲ್ಲಿ ತೆರೆದಿರುವ ಯಾವುದೇ ನಕಲಿ ಖಾತೆಗಳಿಗೆ ಪ್ರತಿಕ್ರಿಯೆ ನೀಡಬೇಡಿ” ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಈ ಕುರಿತಂತೆ ಸೈಬರ್ ಕ್ರೈಮ್ ಇಲಾಖೆಯ ಗಮನಕ್ಕೆ ತಂದಿದ್ದು, ನಕಲಿ ಖಾತೆಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.