ಕೆ.ಆರ್.ನಗರ ಶಾಸಕರು ಭಿಕ್ಷೆ ಎತ್ತಲಿ ಎಂಬ ಮಾಜಿ ಶಾಸಕ ಸಾರಾ ಮಹೇಶ್ ಟೀಕೆಗೆ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ರವಿಶಂಕರ್ ಅವರು ತಿರುಗೇಟು ನೀಡಿದರು. ಭಾನುವಾರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ಸಾರಾ ಮಹೇಶ್ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೆ ಆದ್ರೆ ಅವರು ಮಾತ್ರ ರಾಜಕೀಯ ಮಾಡ್ತಾ ಇದ್ದಾರೆ. ನೀವು ಅಧಿಕಾರದಲ್ಲಿದ್ದಾಗ ವೈಯಕ್ತಿಕವಾಗಿ 400 ಕೋಟಿ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದೀರಲ್ಲ ಅದು ಎಲ್ಲಿಂದ ಬಂತು ಎಂದು ಸಾರ್ವಜನಿಕರಿಗೆ ತಿಳಿಸಿ ಎಂದು ಸಾವಾಲು ಹಾಕಿದರು.