ಬಾಡಿಗೆಗೆ ಟ್ರಾಕ್ಟರ್ ಕೊಡುವ ಮುನ್ನ ಎಚ್ಚರ..ಎಚ್ಚರ..ರೈತರನ್ನೇ ಟಾರ್ಗೆಟ್ ಮಾಡಿ ತಿಂಗಳಿಗೆ ಬಾಡಿಗೆ ಕೊಡ್ತೇನೆ ಎಂದು ಟ್ರಾಕ್ಟರ್ ಪಡೆದು ಮಹಾ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಚಿಕ್ಕಜಾಲ ಬಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಚಿಕ್ಕಜಾಲ ಪೊಲೀಸರು ದೇವರಾಜ ಎಂಬಾತನನ್ನ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ರೈತರ ಬಳಿ ಟ್ರ್ಯಾಕ್ಟರ್ ಬಾಡಿಗೆ ಕೇಳ್ತಿದ್ದ ಆರೋಪಿ ದೇವರಾಜ್, ತಿಂಗಳಿಗೆ 30 ಸಾವಿರ ಹಣವನ್ನ ಟ್ರ್ಯಾಕ್ಟರ್ ಒಂದಕ್ಕೆ ಬಾಡಿಗೆಗೆ ನೀಡ್ತೀನಿ ಅಂತಿದ್ದ. ಟ್ರ್ಯಾಕ್ಟರ್ ಬಾಡಿಗೆ ಪಡೆದ ವಿಚಾರವಾಗಿ ಅಗ್ರಿಮೆಂಟ್ ಕೂಡ ಮಾಡಿಸ್ತಿದ್ದ. ದೇವರಾಜನನ್ನ ನಂಬಿದ ರೈತರು ತಿಂಗಳ ಆದಾಯ ಸಿಗುತ್ತೆ ಎನ್ನುತ್ತಿದ್ದ