ಕಲಬುರಗಿ ಜಿಲ್ಲೆಯಲ್ಲಿ ನಿಷೇಧಿತ ಕ್ಯಾಟ್ಫಿಶ್ ಎಂದೇ ಕರೆಯಲಾಗುವ ಮೀಸೆ ಮೀನುಗಳ ಅಕ್ರಮ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ. ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯೆಂಬುದನ್ನು ಲೆಕ್ಕಿಸದೇ ಮೀಸೆ ಮೀನುಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ದಲಿತ ಸೇನೆ ಕಲಬುರಗಿ ದಕ್ಷಿಣ ವಿಭಾಗೀಯ ಅಧ್ಯಕ್ಷ ಸಮೀರ ಅವಂಟಿ ಆರೋಪ ಮಾಡಿದ್ದಾರೆ. ಶುಕ್ರವಾರ ಮೂರು ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಕೊಚ್ಚೆಗಳಲ್ಲಿ ಬೆಳೆಯುವ ಇಂತಹ ಮೀನು ಸೇವನೆಯಿಂದ ಕ್ಯಾನ್ಸರ್, ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಸಂಭವಿಸುವ ಅಪಾಯ ಇರುತ್ತದೆ. ಜಿಲ್ಲೆಯ ಒಳಬಾಗ ಮತ್ತು ಹೊರರಾಜ್ಯಗಳಿಂದ ಮಿಸೆಮೀನು ಸಾಗಾಟ ಆಗುತ್ತಿವೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇದರ ಹಿಂದೆ ದೊಡ್ಡ ಜಾಲ ಕಾ