ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಶ್ರೀ ಫೋಕ್ಸೋ ಕೇಸ್: ನ.26 ಕ್ಕೆ ತೀರ್ಪು ಪ್ರಕಟ ಸಾಧ್ಯತೆ
ಚಿತ್ರದುರ್ಗದ ಮುರುಘಾಶ್ರೀಗಳ ಪ್ರಕರಣದಲ್ಲಿ ತೀರ್ಪು ಪ್ರಕಟಿಸುವ ದಿನಾಂಕ ನಿಗದಿಯಾಗಿದೆ. ನವೆಂಬರ್ 26 ಕ್ಕೆ ಫೋಕ್ಸೋ ಕೇಸ್ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಲ್ಲಿ ವಾದ & ಪ್ರತಿವಾದ ನಡೆಸಲಾಗಿತ್ತು. ಶ್ರೀಗಳ ಪರವಾಗಿ ಕಳೆದ ವಾರ ಹೈಕೋರ್ಟ್ ಹಿರಿಯ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಬಳಿಕ ಸಂತ್ರಸ್ತ ಬಾಲಕಿಯರ ಪರವಾಗಿ ಇಂದು ಪ್ರಾಸಿಕ್ಯೂಷನ್ ವಾದ ಮಂಡನೆ ಮಾಡಿದ್ದರು. ಸರ್ಕಾರಿ ಅಭಿಯೋಜಕರಾದ ಜಗದೀಶ್ ವಾದ ಮಂಡಿಸಿದ್ದರು. ವಾದ ಪ್ರತಿವಾದ ಆಲಿಸಿರುವ ಕೋರ್ಟ್ ನವೆಂಬರ್ 26 ಕ್ಕೆ ತೀರ್ಪು ಕಾಯ್ದಿರಿಸಿದೆ. ನ್ಯಾಯಾದೀಶರಾದ CG ಹಡಪದ ಅವರ ತೀರ್ಪು ಪ್ರಕಟಿಸುವ ದಿನಾಂಕ ಆದೇಶಿಸಿದ್ದಾರೆ