ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂತನ ವರ್ಷಾಚರಣೆ ವೇಳೆ ಪ್ರಮುಖವಾಗಿ ಜನ ಸಂದಣಿ ಉಂಟಾಗುವ ಪ್ರದೇಶಗಳಾದ ಕೋರಮಂಗಲ ಹಾಗೂ ಜೆಪಿ ನಗರಗಳಲ್ಲಿ ಪೊಲೀಸ್, ಟ್ರಾಫಿಕ್, ಬೆಸ್ಕಾಂ, ಪಾಲಿಕೆಯ ಆರೋಗ್ಯ, ಘನ ತ್ಯಾಜ್ಯ ಹಾಗೂ ಕಾಮಗಾರಿ ವಿಭಾಗದಿಂದ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಸಮನ್ವಯತೆಗಾಗಿ ಅಪರ ಆಯುಕ್ತರಾದ ನವೀನ್ ಕುಮಾರ್ ರಾಜು ರವರು ಜಿಬಿಎ ಕಚೇರಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. ನೂತನ ವರ್ಷಾಚರಣೆ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅವಘಡ ನಡೆಯದಂತೆ ತಡೆಯುವ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು ಅಗತ್ಯವಿದ್ದು, ಅದರಂತೆ ಕೋರಮಂಗಲ ಹಾಗೂ ಜೆಪಿ ನಗರ ವ್ಯಾಪ್ತಿಯ ಅಧಿಕಾರಿಗಳು ಕ್ರಮ