ಶಿಕಾರಿಪುರ: ಬಿಳಕಿ ಗ್ರಾಮದಲ್ಲಿ ಕಾರು ಕಳ್ಳತನಕ್ಕೆ ಯತ್ನ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ
ಹಾರ್ಡ್ ವೇರ್ ಶಾಪ್ ಮುಂಭಾಗ ನಿಲ್ಲಿಸಿದ್ದಂತಹ ಕಾರನ್ನ ಭಾನುವಾರ ಬೆಳ್ಳಂ ಬೆಳಗ್ಗೆ ಖದೀಮನೊಬ್ಬ ಕದಿಯಲು ಯತ್ನಿಸಿದ್ದ, ಈ ವೇಳೆ ಶಾಪ್ ಮಾಲೀಕ ಕಳ್ಳನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿರುವಾಗ ಘಟನೆ ನಡೆದಿದೆ. ಬಿಳಕಿ ಗ್ರಾಮದ ಗಂಟಿ ರಾಜಣ್ಣ ಎಂಬುವವರ ಹಾರ್ಡ್ ವೇರ್ ಶಾಪ್ ಮುಂಭಾಗ ನಿಲ್ಲಿಸಿದ್ದ ಕಾರನ್ನು ಬೈಕ್ ನಲ್ಲಿ ಬಂದಂತಹ ಕಳ್ಳ ಕದಿಯಲು ಯತ್ನಿಸಿದ್ದಾನೆ.ಈ ವೇಳೆ ಸಿಸಿ ಕ್ಯಾಮೆರಾ ಅಲರ್ಟ್ ಸಿಗ್ನಲ್ ನೋಡಿ ಶಾಪ್ ಸಮೀಪ ಬಂದು ಕಳ್ಳನನ್ನ ಶಾಪ್ ಮಾಲೀಕ ಗಂಟಿ ರಾಜಣ್ಣ ಹಿಡಿದು ದೇವಸ್ಥಾನದಲ್ಲಿ ಕೂಡಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಆಟ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.