ಬುಧವಾರ ನಡೆದ ಶಾಸಕರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವರ್ತನೆ ವಾಲ್ಮೀಕಿ ಸಮಾಜದಲ್ಲಿ ದೊಡ್ಡ ಮಟ್ಟದ ಅಸಮಾಧಾನಕ್ಕೆ ಕಾರಣವಾಗಿದೆ. ಸಭೆಯಲ್ಲಿ ಸಿಎಂ, ಡಿಸಿಎಂ ಹಾಗೂ ಹಲವು ಸಚಿವರು ವೇದಿಕಾ ಮೇಲೆ ಕುಳಿತಿದ್ದರೂ, ವಾಲ್ಮೀಕಿ ಸಮಾಜದ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ವೇದಿಕೆಯಲ್ಲಿ ಸ್ಥಾನ ನೀಡದೆ, ಎರಡನೇ ಸಾಲಿನ ಶಾಸಕರ ಜೊತೆ ಕುಳ್ಳಿರಿಸಿದ್ದರಿಂದ ಸಮಾಜದೊಳಗೆ ಆಕ್ರೋಶ ಎದ್ದಿದೆ ಎಂದು ವಾಲ್ಮೀಕಿ ಸಮಾಜದ ಯುವ ಮುಖಂಡರಾದ ಮಹೇಂದ್ರ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ತಲೆಮಾರುಗಳಿಂದ ಪರಿಶಿಷ್ಟ ಪಂಗಡ ಹಾಗೂ ವಿಶೇಷವಾಗಿ ವಾಲ್ಮೀಕಿ ಸಮಾಜವನ್ನು ಕಡೆಗಣಿಸುತ್ತ ಬಂದಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.