ಶಿವಮೊಗ್ಗ: ಕೇಂದ್ರದ ಭಾರತ್ ರೈಸ್ ಯೋಜನೆ ಪುನಾರಂಭಕ್ಕೆ ನಗರದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ್ದ ಭಾರತ್ ರೈಸ್ ಯೋಜನೆಯನ್ನ ಸ್ಥಗಿತಗೊಳಿಸಿರುವುದು ಬಡವರ ಅನ್ನದ ಜೊತೆಗೆ ಆಟವಾಡಿದಂತಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟ್ ನ ವ್ಯವಸ್ಥೆ ಕಲ್ಲೂರು ಮೇಘರಾಜ್ ಹೇಳಿದ್ದಾರೆ. ಶುಕ್ರವಾರ ಶಿವಮೊಗ್ಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀಸಾಮಾನ್ಯರಿಗೂ ಹಗ್ಗದಾದ ದರದಲ್ಲಿ ಅಕ್ಕಿ ಸಿಗಬೇಕೆಂಬ ಉದ್ದೇಶದಿಂದ ಭಾರತ ರೈಸ್ ಯೋಜನೆಯನ್ನು ಜಾರಿಗೆ ತರಲಾಗಿತ್ತು ಆದರೆ ಈ ಯೋಜನೆಯನ್ನು ಜುಲೈ 1ರಿಂದಲೇ ರದ್ದು ಮಾಡಲಾಗಿದೆ ಇದು ಅತ್ಯಂತ ಖಂಡನೀಯವಾದದ್ದು ಎಂದು ಹೇಳಿದರು.