ಶಿವಮೊಗ್ಗ: ಕೊನಗವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವಜಾಗೊಳಿಸುವಂತೆ ಯಡವಾಲ ಗ್ರಾಮದ ಜಿ.ಎಂ ಹಾಲೇಶಪ್ಪ ಒತ್ತಾಯ
ಕೊನಗವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಕಲಿ ದೃಢೀಕರಣ ಪತ್ರ ನೀಡಿದ್ದು, ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಯಡವಾಲ ಗ್ರಾಮದ ಜಿಎಂ ಹಾಲೇಶಪ್ಪ ಅವರು ಒತ್ತಾಯಿಸಿದ್ದಾರೆ. ಶುಕ್ರವಾರ ಶಿವಮೊಗ್ಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊನಗವಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಅವರು ಗ್ರಾಮದ ಖಾತೆ ನಂಬರ್ 49ಕ್ಕೆ ಸಂಬಂಧಿತಂತೆ ಅನಧಿಕೃತವಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸಗಿ ಅನಧಿಕೃತವಾಗಿ ತಪ್ಪು ಮಾಹಿತಿವುಳ್ಳ ದೃಢೀಕರಣವನ್ನು ನೀಡಿದ್ದಾರೆ ಎಂದು ಹಾಲೇಶಪ್ಪ ಆರೋಪಿಸಿದರು.