ಮಂಡ್ಯ: ಎಂಡಿಸಿಸಿ ಬ್ಯಾಂಕ್ ಚುನಾವಣೆ, ಕಾಂಗ್ರೆಸ್ ಬೆಂಬಲಿತ 8 ನಿರ್ದೇಶಕರ ಅವಿರೋಧ ಆಯ್ಕೆ
Mandya, Mandya | Oct 27, 2025 ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ 8 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಕುರಿತು ಸೋಮವಾರ ಸಂಜೆ ನಗರದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾಹಿತಿ ನೀಡಿದ್ದಾರೆ. ವ್ಯವಸಾಯ ಪತ್ತಿನ ಸಹಕಾರ ಸಂಘಗಳಿಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಸಚಿನ್ ಚಲುವರಾಯಸ್ವಾಮಿ ಹಾಗೂ ಪಿ.ಸಂದರ್ಶ್ ಹಾಗೂ TAPCMSನಿಂದ ದಿನೇಶ್, ಕೈಗಾರಿಕ ಮತ್ತು ಇತರೆಯಿಂದ ಹಾಲಿ ಅಧ್ಯಕ್ಷ ಜೋಗಿಗೌಡ ಮತ್ತು ಜಿಲ್ಲಾ ಬಳಕೆದಾರರು ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘದಿಂದ ಹಾಲಹಳ್ಳಿ ಅಶೋಕ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.ಈ ವೇಳೆ ಮನ್ಮುಲ್ ಅಧ್ಯಕ್ಷ ಯು ಸಿ ಶಿವಪ್ಪ ಹಾಜರಿದ್ದರು.