ಮಾನ್ವಿ: ಮಾನ್ವಿ : ಕಳಪೆ ಭತ್ತದ ಬೀಜ ಫಸಲು ಕೊಡದ ಭತ್ತ
Manvi, Raichur | Oct 27, 2025 ನೀಲಕಂಠೇಶ್ವರ ಕಂಪನಿಯ ಭತ್ತದ ಬೀಜವನ್ನು ತಾಲ್ಲೂಕಿನ ಅತಿ ಹೆಚ್ಚು ರೈತರು ಖರೀದಿ ಮಾಡಿ ಭತ್ತದ ಬೆಳೆ ಬೆಳೆಸಿದ್ದಾರೆ. ಮಾನ್ವಿ ತಾಲ್ಲೂಕಿನಾದ್ಯಂತ ಕಳಪೆ ಬೀಜದಿಂದ ಭತ್ತದ ಬೆಳೆಗೆ ವೈರಸ್ ಹರಡೆ ಅಲ್ಲದೇ ಭತ್ತದ ತೆನೆಯೂ ಬಿಟ್ಟಿಲ್ಲ ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಕಂಪನಿಯ ಬೀಜಕ್ಕೆ ರೋಗ ನಿಯಂತ್ರಣ ಸಾಮರ್ಥ್ಯ ಇಲ್ಲದ ಕಾರಣ ಬೆಂಕಿ ರೋಗ ತಗುಲಿದ್ದು ಬೆಳೆ ಸಂಪೂರ್ಣ ನಷ್ಟವಾಗಿದೆ. ಒಂದೆಡೆ ಮಳೆಯಿಂದ ನಷ್ಟ, ಇದೀಗ ಕಳಪೆ ಬೀಜದ ಸಮಸ್ಯೆಯಿಂದ ಭತ್ತದ ಬೆಳೆ ಕೈಗೆ ಸಿಗದೆ ನಷ್ಟ.