ಶಿಡ್ಲಘಟ್ಟ: ಡೆಂಘೀ ಜ್ವರದ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ, ತಾತ್ಸಾರ ಬೇಡ: ಶಿಡ್ಲಘಟ್ಟದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ
ಡೆಂಗಿ ಜ್ವರದ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಇದರ ಬಗ್ಗೆ ತತ್ಸಾರ ಬೇಡ ಎಂದು ತಹಸಿಲ್ದಾರ್ ಬಿ ಎಂ ಸ್ವಾಮಿ ಇಂದು ಶುಕ್ರವಾರ ಬೆಳಗ್ಗೆ 10:30 ಗಂಟೆ ಸುಮಾರಿನಲ್ಲಿ ಶಿಡ್ಲಘಟ್ಟ ನಗರದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ತಿಳಿಸಿದರು ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ವಹಿಸಿದೆ ಆದರೂ ಸಾರ್ವಜನಿಕರು ತಮ್ಮ ಮನೆಗಳ ಸುತ್ತಮುತ್ತಲು ಸ್ವಚ್ಛವಾಗಿ ಇರಿಸಿಕೊಳ್ಳುವ ದೆಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಅಲ್ಲದೆ ಈ ಬಗ್ಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು ಇಲ್ಲವಾದಲ್ಲಿ ಸೊಳ್ಳೆಗಳನ್ನ ನಿಯಂತ್ರಣಕ್ಕೆ ತರಲು ಸೊಳ್ಳೆಗಳನ್ನ ನಿಯಂತ್ರಣಕ್ಕೆ ತರಲು ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನ ಹೆಚ್ಚು ಮಾಡಿಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು