ಬೆಳಗಾವಿ ಸುವರ್ಣಸೌಧದ ಸದನದಲ್ಲಿ ನಡೆದ ಅಧಿವೇಶನದಲ್ಲಿ, ಶಾಸಕರು ಅಮರಾಪುರ ಕ್ರಾಸ್ ಬಳಿ ಪ್ರೌಢ ಶಾಲೆಯನ್ನು ಮಂಜೂರು ಮಾಡುವಂತೆ ಬಲವಾಗಿ ಬೇಡಿಕೆ ಇಟ್ಟರು. ಈ ಬೇಡಿಕೆಯಿಂದಾಗಿ ಸುತ್ತಮುತ್ತಲಿನ 8 ರಿಂದ 10 ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಮತ್ತು ಆಭಾಗದ ಶೈಕ್ಷಣಿಕ ಅಗತ್ಯವನ್ನು ಪೂರೈಸುತ್ತದೆ ಎಂದು ಅವರು ಸದನಕ್ಕೆ ಮನವರಿಕೆ ಮಾಡಿದರು. ಶಾಸಕರ ಈ ಮಹತ್ವದ ಬೇಡಿಕೆಗೆ ಸಂಬಂಧಪಟ್ಟ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಮೂಲಕ ಶಾಲಾ ಮಂಜೂರಾತಿಯ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.