ಆಳಂದ: ಪಟ್ಟಣದ ಸಿದ್ದಲಿಂಗ ಶಿವಾಚಾರ್ಯ ಮಠಕ್ಕೆ ಸಂಸದ ಖೂಬಾ ಭೇಟಿ
ಆಳಂದ ಪಟ್ಟಣದ ಸಿದ್ದಲಿಂಗ ಶಿವಾಚಾರ್ಯ ಹಿರೇಮಠಕ್ಕೆ ಕೇಂದ್ರ ಸಚಿವ,ಬೀದರ್ ಬಿಜೆಪಿ ನಿಯೋಜಿತ ಅಭ್ಯರ್ಥಿ ಭಗವಂತ ಖೂಬಾ ಅವರು ಶನಿವಾರ ಸಂಜೆ 5 ಘಂಟೆಗೆ ಭೇಟಿ ನೀಡಿದರು.ಬಳಿಕ ಮಠದ ಪೂಜ್ಯರಾದ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ,ಆರ್ಶೀವಾದ ಪಡೆದುಕೊಂಡರು.ಈ ಸಂದರ್ಭದಲ್ಲಿ ಸಚಿವರು ಕೂಡ ಸ್ವಾಮೀಜಿ ಮಾತನಾಡಿದರು.ಈ ವೇಳೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಸೇರಿದಂತೆ ಮುಖಂಡರು,ಭಕ್ತರು ಉಪಸ್ಥಿತರಿದ್ದರು.