ಕುರುಗೊಡು: ಸಿದ್ದಮ್ಮನಹಳ್ಳಿ-ಕುಡುತಿನಿ ರಸ್ತೆಯಲ್ಲಿ ಲಾರಿ ಪಲ್ಟಿ, ಪುಲ್ ಟ್ರಾಫಿಕ್
ಸಿದ್ದಮ್ಮನಹಳ್ಳಿ-ಕುಡುತಿನಿ ರಸ್ತೆಯಲ್ಲಿ ಲಾರಿ ಪಲ್ಟಿ, ಪುಲ್ ಟ್ರಾಫಿಕ್ ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಕುಡುತಿನಿ ರಸ್ತೆಯಲ್ಲಿರುವ ರೈಲ್ವೇ ಬ್ರೀಡ್ಜ್ ಬಳಿ ನಿನ್ನೆ ಸಂಜೆ ಲಾರಿಯೊಂದು ಪಲ್ಟಿಯಾದ(ಸ್ಕೀಡ್) ಹಿನ್ನೆಲೆಯಲ್ಲಿ ಅ.27,ಸೋಮವಾರ ಮಧ್ಯಾಹ್ನ 2:30ಕ್ಕೆ ರಸ್ತೆ ತುಂಬೆಲ್ಲಾ ಬಸ್ಸು, ಲಾರಿ ಹಾಗೂ ಇತರೆ ವಾಹನಗಳು ಟ್ರಾಫಿಕ್ ನಲ್ಲಿ ಸಿಲುಕಿರುವ ಘಟನೆ ನಡೆದಿದೆ. ಇನ್ನು ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಟ್ರಾಫಿಕ್ ಕ್ಲೀಯರದ ಮಾಡುವಲ್ಲಿ ಕಾರ್ಯಪ್ರವೃತ್ತಿಯೊಂದಿದರು.