ಶಿವಮೊಗ್ಗ: ಸಂಸ್ಕೃತಮ್ ಹೆಸರಿನಲ್ಲಿ ಆನ್‌ಲೈನ್ ತರಗತಿ ಆರಂಭ: ನಗರದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ
ಸಂಸ್ಕೃತ ಭಾಷೆನ ಸರಳವಾಗಿ ಕಲಿಸುವ ನಿಟ್ಟಿನಲ್ಲಿ ಪಠಾಮಿ ಸಂಸ್ಕೃತಮ್ ಎಂಬ ಹೆಸರಿನಲ್ಲಿ ಆನ್ಲೈನ್ ತರಗತಿಗಳು ಆರಂಭಿಸಲಾಗಿದೆ ಎಂದು ಸಂಸ್ಕೃತ ಭಾರತಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿವಿ ನರಸಿಂಹಮೂರ್ತಿ ಹೇಳಿದರು. ಶಿವಮೊಗ್ಗ ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸ್ಕೃತ ಭಾಷೆ ವಿಶ್ವಭಾಷೆಯಾಗಿದೆ ಯಾವುದೇ ಹೊಸ ಭಾಷೆ ಕಲಿಯಲು ಮಾತೃಭಾಷೆಯ ಮೂಲಕವೇ ಕಲಿಸಬೇಕಾಗಿದೆ.ಈಗ ಹೊಸ ಹೊಸ ತಂತ್ರಜ್ಞಾನದ ಮೂಲಕ ಭಾಷೆ ಕಲಿಯಬಹುದಾಗಿದೆ.ಅದೇ ರೀತಿ ಸಂಸ್ಕೃತ ಭಾಷೆಯನ್ನು ಕೂಡ ಕೇವಲ 100 ದಿನಗಳಲ್ಲಿ ಮಾತನಾಡುವುದು ಮತ್ತು ಓದುವುದನ್ನು ಕಲಿಸುವ ಒಂದು ವಿನೂತನ ಯೋಜನೆ ಪಟ್ಟಮಿ ಸಂಸ್ಕೃತಮ್ ಆಗಿದೆ ಎಂದು ಹೇಳಿದರು.