ಶಿರಸಿ : ನಾಡದೇವಿ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಉತ್ಸವಕ್ಕಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊಸದೊಂದು ಪಲ್ಲಕ್ಕಿ ಮಾಡಲಾಗಿದ್ದು, ಆ ಪಲ್ಲಕ್ಕಿಯನ್ನು ಭಾನುವಾರ ಸಂಜೆ 4:30 ಗಂಟೆ ಸುಮಾರಿಗೆ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಈ ಪಲ್ಲಕ್ಕಿಯನ್ನು ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಶಿಲ್ಪಾ ಇಂಡಸ್ಟ್ರೀಸ್ ನ ಪ್ರಶಾಂತ ಗುಡಿಗಾರ ಕುಟುಂಬದವರಿಂದ ತಯಾರಿಸಲಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅದ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೆಕರ್, ಧರ್ಮದರ್ಶಿಗಳಾದ ಸುದೀರ ಹಂದ್ರಾಳ, ಎಸ್ ಪಿ ಶೆಟ್ಟಿ, ವತ್ಸಲಾ ಹೆಗಡೆ, ಬಾಬುದಾರರಾದ ಜಗದೀಶ ಗೌಡ್ರು,ರಮೇಶ ದಬ್ಬೆ, ಬಸವರಾಜ ಚಕ್ರಸಾಲಿ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿರಿದ್ದರು.