ಹುಮ್ನಾಬಾದ್: ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ನಿಮ್ಮ ಸಮಸ್ಯೆ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವೆ: ಹಳ್ಳಿಖೇಡ(ಬಿ)ದಲ್ಲಿ ಎಂಎಲ್ಸಿ ಶಶೀಲ್ ನಮೋಷಿ
Homnabad, Bidar | Nov 19, 2025 ಸರ್ಕಾರಿ ಶಾಲಾ ಕಾಲೇಜು, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ಎಂಎಲ್ಸಿ ಶಶೀಲ್ ನಮೋಶಿ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಹಳ್ಳಿಖೇಡ್(ಬಿ)ದಲ್ಲಿ ಕರೆಯಲಾಗಿದ್ದ ಶಿಕ್ಷಕರ ಸಭೆಯಲ್ಲಿ ಸಮಸ್ಯೆ ಆಲಿಸಿ ಮಾತನಾಡಿದರು. ಬಿಟಿವಿಪಿ ಆಡಳಿತ ಅಧಿಕಾರಿ ಗುಂಡಯ್ಯ ಎಸ್. ತೀರ್ಥ, ಪ್ರಾಚಾರ್ಯ ಮಸ್ತಾನ್ ಪಟೇಲ್ ಮತ್ತಿತರರು ಸಭೆಯಲ್ಲಿದ್ದರು.