ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವತಿಯೊಬ್ಬಳಿಗೆ ಗಂಭೀರ ಗಾಯವಾಗಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಹೊಸನಗರ ರಸ್ತೆಯ ಚಿಪ್ಪಿಗರಕೆರೆಯ ಬಳಿ ಶುಕ್ರವಾರ ರಾತ್ರಿ ನಡೆದಿದ್ದು ಶನಿವಾರ ಬೆಳಿಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಅತೀ ವೇಗವಾಗಿ ಬಂದು ಅಜಾಗರೂಕತೆಯಿಂದ ಸ್ಕೂಟಿಗೆ ಡಿಕ್ಕಿಯಾಗಿ ನಂತರ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಗವಟೂರು ಸಮೀಪದ ಹಳೂರು ನಿವಾಸಿ ಅನ್ನಪೂರ್ಣ ಎಂಬ ಯುವತಿಗೆ ಗಂಭೀರ ಗಾಯವಾಗಿದೆ. ಹೊಸನಗರ ರಸ್ತೆಯ ಕೆರೆಯ ಏರಿ ಮೇಲೆ ಹಳೂರು ನಿವಾಸಿ ಸಂಜೀವ್ ತಮ್ಮ ಮಗಳೊಂದಿಗೆ ಹೊಂಡಾ ಆಕ್ಟೀವಾ ಸ್ಕೂಟಿಯಲ್ಲಿ ಗವಟೂರಿನಿಂದ ಪಟ್ಟಣದ ಕಡೆಗೆ ಬರುತಿದ್ದಾಗ ಅಪಘಾತ ವಾಗಿದೆ