ಮಳವಳ್ಳಿ: ಪಟ್ಟಣದಲ್ಲಿ ಚೆಸ್ಕಾಂ ಪ್ರಕಟಣೆ, ನವೆಂಬರ್ 21ರಂದು ಮಳವಳ್ಳಿ, ಹಾಡ್ಲಿ ವ್ಯಾಪ್ತಿಯ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಎಂದಿರುವ ಇಇ
ಮಳವಳ್ಳಿ : ಚೆಸ್ಕಾಂ ನ ಮಳವಳ್ಳಿ ನಗರ ಉಪ ವಿಭಾಗ ವ್ಯಾಪ್ತಿಯ ಮಳವಳ್ಳಿ ಮತ್ತು ಹಾಡ್ಲಿ 66/11 ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಂಡಿರುವುದರಿಂದ ನವೆಂಬರ್ 21 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5.30 ರವರೆಗೆ ಈ ಕೆಂದ್ರ ವ್ಯಾಪ್ತಿಯ ಮಳವಳ್ಳಿ ಪಟ್ಟಣ ಹಾಗೂ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ಈ ಕುರಿತು ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮಳವಳ್ಳಿ ಪಟ್ಟಣದಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿರುವ ಚೆಸ್ಕಾಂ ನ ಮಳವಳ್ಳಿ ವಿಭಾಗದ ಕಾರ್ಯ ಪಾಲಕ ಅಭಿಯಂತರರಾದ ಟಿ ಪುಟ್ಟಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ 9 ರಿಂದ ಸಾಯಂಕಾಲ 5.30 ರ ವರೆಗೆ ಮಳವಳ್ಳಿ ಪಟ್ಟಣ, ಹಾಗೂ ಹಲವು ಗ್ರಾಮಗಳ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಎಂದಿದ್ದಾರೆ.