ಶ್ರೀನಿವಾಸಪುರ: ಗೌನಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ನಿಯಮಿತಕ್ಕೆ ಅಧ್ಯಕ್ಷರಾಗಿ ವೈ.ಎ.ರಿಯಾಜ್ಪಾಷ, ಉಪಾಧ್ಯಕ್ಷರಾಗಿ ಮೋಹನ್ ಕುಮಾರ್ ಆಯ್ಕೆ
ಗೌನಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ನಿಯಮಿತಕ್ಕೆ ಅಧ್ಯಕ್ಷರಾಗಿ ವೈ.ಎ.ರಿಯಾಜ್ಪಾಷ, ಉಪಾಧ್ಯಕ್ಷರಾಗಿ ಕೆ.ಆರ್.ಮೋಹನ್ಕುಮಾರ್ ಅವಿರೋಧವಾಗಿ ಆಯ್ಕೆ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ನಿಯಮಿತಕ್ಕೆ ಬುಧವಾರ ಆಡಳಿತ ಮಂಡಲಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನವಾಣೆಯಲ್ಲಿ ಅಧ್ಯಕ್ಷರಾಗಿ ವೈ.ಎ.ರಿಯಾಜ್ಪಾಷ, ಉಪಾಧ್ಯಕ್ಷರಾಗಿ ಕೆ.ಆರ್.ಮೋಹನ್ಕುಮಾರ್ ಅವಿರೋಧವಾಗಿ ಆಯ್ಕೆಯಾಗಿ ಮುಂದಿನ ೫ ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆಂದು ಚುನಾವಣಾಧಿಕಾರಿ ಎಂ.ಐ.ಅಬೀದ್ಹುಸೇನ್ ತಿಳಿಸಿದರು.