ಸಾಲಿಗ್ರಾಮ: ತಾಲ್ಲೂಕು ಆಡಳಿತದ ಕಚೇರಿಯಲ್ಲಿ ಡಾ.ಜಗಜೀವನ್ ರಾಮ್ ಜಯಂತಿ ಪೂರ್ವಭಾವಿ ಸಭೆ
ಸಾಲಿಗ್ರಾಮ ತಾಲ್ಲೂಕು ಆಡಳಿತದಿಂದ ನಾಳೆ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಿಸುವ ಹಿನ್ನೆಲೆ ಗುರುವಾರ ತಹಶೀಲ್ದಾರ್ ನರಗುಂದ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ತಹಶೀಲ್ದಾರ್, ಚುನಾವಣಾ ನೀತಿ ಸಂಹಿತೆಯ ಇರುವುದರಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಸಮಾಜದ ಮುಖಂಡರು ಆಗಮಿಸಿ ಜಯಂತಿಗೆ ಸಹಕರಿಸಿ ಸಹಕರಿಸಿ ಎಂದರು. ಸಭೆಯಲ್ಲಿ ತಹಶೀಲ್ದಾರ್ ನರಗುಂದ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.