ಪುರಸಭೆ ಮಳಿಗೆಗಳ ಹರಾಜು ವಿಚಾರವಾಗಿ ಇರುವ ಸಮಸ್ಯೆ ಚುನಾವಣೆ ಕಳೆದ ಮೇಲೆ ಬಗೆಹರಿಯುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ಕೃಷ್ಣರಾಜನಗರದಲ್ಲಿ ಗುರುವಾರ ಮಾಹಿತಿ ನೀಡಿದ್ದಾರೆ. ಪುರಸಭೆಯಿಂದ ಸೀಜ್ ಮಾಡಿರುವ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ಮಾಡುತ್ತಿದ್ದರೆ ಅಂತವರ ಮೇಲೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ವಿದ್ಯುತ್ ಸಂಪರ್ಕಗಳು ಇಲ್ಲ. ಆದರೆ ವಿದ್ಯುತ್ ಸಂಪರ್ಕ ಇದೆ ಎಂದು ಜನರು ನಮಗೆ ಹೇಳುತ್ತಿದ್ದಾರೆ. ಈ ಸಂಬಂಧ ಚೆಸ್ಕಾಂ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.