ಬೆಂಗಳೂರಿನ ಇಂದಿರಾ ನಗರದ ಹಳೇ ತಿಪ್ಪಸಂದ್ರದಲ್ಲಿ ನೂತನವಾಗಿ ಆರಂಭಗೊಂಡ “ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ ಹೋಟೆಲ್” ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಬೆಳಗಿನ ಉಪಹಾರ ಸೇವಿಸಿದರು. 1938ರಲ್ಲಿ ಮೈಸೂರಿನಲ್ಲಿ ಆರಂಭವಾದ ಮೈಲಾರಿ ಹೋಟೆಲ್ ತನ್ನ ವಿಶಿಷ್ಟ ರುಚಿ ಹಾಗೂ ಗುಣಮಟ್ಟದ ತಿನಿಸುಗಳಿಗಾಗಿ ಖ್ಯಾತಿ ಪಡೆದಿದೆ. ಕಾಲೇಜು ದಿನಗಳಿಂದಲೇ ಮೈಲಾರಿ ಹೋಟೆಲ್‌ಗೆ ಭೇಟಿ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರಿನ ಸಾಂಪ್ರದಾಯಿಕ ರುಚಿ ಇದೀಗ ಬೆಂಗಳೂರಿನ ಜನರಿಗೆ ಲಭ್ಯವಾಗುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು. ಹೊಸ ಶಾಖೆಯ ಯಶಸ್ಸಿಗೆ ಅವರು ಶುಭಹಾರೈಕೆ ಸಲ್ಲಿಸಿದರು.