ಕೃಷ್ಣರಾಜನಗರ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯಿತಿಗೆ ಚುನಾವಣಾ ಆಯೋಗದಿಂದ ಖರ್ಚು ವೆಚ್ಚ ನೀಡುವಂತೆ ತಾಲ್ಲೂಕು ಪಿಡಿಒಗಳ ಸಂಘದಿಂದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಸಹಾಯಕ ಚುನಾವಣಾಧಿಕಾರಿ ಸುಪ್ರೀತ ಬಣಗಾರ್‌ಗೆ ದೂರು ನೀಡಿದರು. ಗ್ರಾಮ ಪಂಚಾಯಿತಿಯಿಂದಲೇ ಖರ್ಚು-ವೆಚ್ಚ ಮಾಡಬೇಕೆಂದು ಒತ್ತಡ ಹಾಕಲಾಗುತ್ತಿದೆ. ಆದರೆ, ಯಾವುದೇ ಆದೇಶ ನೀಡಿಲ್ಲ. ಮಾತಿನಲ್ಲಿ ಹೇಳುತ್ತಿರುವುದು ನಮಗೆ ನಿರ್ವಹಿಸಲು ಕಷ್ಟವಾಗುತ್ತಿದೆ. ಕೂಡಲೇ ಇದರ ಬಗ್ಗೆ ಪರಿಶೀಲನೆ ಮಾಡಿ ಮತಗಟ್ಟೆ ಖರ್ಚು ವೆಚ್ಚಕ್ಕೆ ಹಣ ನೀಡುವಂತೆ ಮನವಿ ಮಾಡಿದರು.