ದಾಂಡೇಲಿ: ಅಂಬೇವಾಡಿಯ ಮೌಳಂಗಿ ಕ್ರಾಸ್ ಹತ್ತಿರ ಚಿರತೆ ಪ್ರತ್ಯಕ್ಷ
ದಾಂಡೇಲಿ : ತಾಲೂಕಿನ ಅಂಬೇವಾಡಿಯ ಮೌಳಂಗಿ ಕ್ರಾಸ್ ಹತ್ತಿರ ಚಿರತೆಯೊಂದು ಪ್ರತ್ಯಕ್ಷವಾದ ಘಟನೆ ಇಂದು ಗುರುವಾರ ಬೆಳಿಗ್ಗೆ 5.30 ಗಂಟೆ ಸುಮಾರಿಗೆ ನಡೆದಿದೆ. ಬರ್ಚಿ ರಸ್ತೆಯಿಂದ ಮೌಳಂಗಿಗೆ ಹೋಗುವ ರಸ್ತೆಯ ಅಂಬೇವಾಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದನ್ನು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಗಮನಿಸಿದ್ದಾರೆ. ಈ ಪ್ರದೇಶದ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗಿದೆ.