ಬಳ್ಳಾರಿ: ಪಾಲಿಕೆಯ ಮೇಯರ್ ಆಗಿ ಪಿ.ಗಾದೆಪ್ಪ, ಉಪಮೇಯರ್ ಆಗಿ ಮುಬೀನಾ ಬಿ ಆಯ್ಕೆ
ಬಳ್ಳಾರಿಯ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಶನಿವಾರ ಮಧ್ಯಾಹ್ನ 12ಗಂಟೆ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದ 23ನೇ ವಾರ್ಡ್ನ ಸದಸ್ಯ, ಹಿರಿಯ ಕಾರ್ಪೋರೇಟರ್ ಪಿ.ಗಾದೆಪ್ಪ ಅವರು ಮೇಯರ್ ಆಗಿಯೂ, ಹಾಗೂ 28ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಮುಬೀನಾ ಬಿ ಅವರು ಉಪ-ಮೇಯರ್ ಆಗಿಯೂ ಚುನಾಯಿತರಾಗಿದ್ದಾರೆ. ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯು ಸಾಮಾನ್ಯ ವರ್ಗಕ್ಕೂ, ಉಪಮೇಯರ್ ಹುದ್ದೆಯು ಸಾಮಾನ್ಯ ವರ್ಗದ ಮಹಿಳೆಗೂ ಮೀಸಲಾಗಿದ್ದರಿಂದ, ಆಡಳಿತಾರೂಢ ಕಾಂಗ್ರಸ್ ಪಕ್ಷದಲ್ಲಿನ ಕಾರ್ಪೋರೇಟರ್ಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೆಪಿಸಿಸಿ ವತಿಯಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಆರ್.ವಿ.ವೆಂಕಟೇಶ್ ಮತ್ತು ಸೂರಜ್ ಹೆಗಡೆಯವರು, ಎಐಸಿಸಿ