ಬಾಣಗೆರೆ ಗ್ರಾಮದಲ್ಲಿ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಹೊಳಲ್ಕೆರೆ ತಾಲ್ಲೂಕಿನ ಬಾಣಗೆರೆ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದ್ದು 70 ವರ್ಷದ ಜಯಪ್ಪ ಮೃತಪಟ್ಟಿದ್ದಾರೆ. ಇನ್ನೂ ಮೃತ ಕರಿಯಪ್ಪ ಅವರು ಗ್ರಾಮದ ಅಂಗಡಿ ಮುಂದೆ ತಮ್ಮ ಸೋದರನ ಜೊತೆ ಮಾತನಾಡುತ್ತಾ ನಿಂತಿದ್ದು ಆ ವೇಳೆ ವೇಗವಾಗಿ ಬಂದ ಬೈಕ್ ಒಂದು ಜಯಪ್ಪ ಅವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಜಯಪ್ಪ ಅವರಿಗೆ ಗಂಭೀರವಾದ ಪೆಟ್ಟು ಬಿದ್ದಿದ್ದು ತಲೆಯ ಹಿಂಬಾಗಕ್ಕೆ ಪೆಟ್ಟು ಬಿದ್ದು ಕಿವಿಯಲ್ಲಿ ರಕ್ತ ಬಂದು ಮೃತಪಟ್ಟಿದ್ದಾರೆ.