ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ಕೆರೆಹೊಸಳ್ಳಿ ಗ್ರಾಮದ ಯುವತಿ ನಾಪತ್ತೆ ಯಾಗಿದ್ದು ಹುಡುಕಿ ಕೊಡುವಂತೆ ಅವರ ತಾಯಿ ಶರಾವತಿ ಪುಟ್ಟಾ ಸಿದ್ದಿ ದೂರು ನೀಡಿದ್ದಾಳೆ. ಕಳೆದ ಅಗಸ್ಟ್ 7ರಂದು 16 ವರ್ಷದ ಮಗಳು ನಂದಿನಿ ಪುಟ್ಟಾ ಸಿದ್ದಿ ಬೆಳಿಗ್ಗೆ ಎಲ್ಲೋ ಹೋಗಿ ಅಥವಾ ಯಾರೋ ಅಪಹರಿಸಿ ಕಾಣೆಯಾಗಿದ್ದಾಳೆ. ಸಂಬಂಧಿಕರ ಊರು ಎಲ್ಲ ಕಡೆ ಹುಡುಕಿದರೂ ಇವರೆಗೂ ಪತ್ತೆಯಾಗಿಲ್ಲ. ಇದೀಗ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ.ಯುವತಿ ಅವಳು 5 ಪೂಟ್ 2 ಇಂಚು ಎತ್ತರ ಇದ್ದು, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ದುಂಡನೆಯ ಮುಖ, ಕಪ್ಪು ಕೂದಲು ಹೊಂದಿದ್ದು, 9ನೇ ತರಗತಿಯವರೆಗೆ ಓದಿದ್ದು, ಕನ್ನಡ ಹಾಗೂ ಮರಾಠಿ ಮಾತನಾಡುತ್ತಾಳೆ. ಅವಳನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.