ಬೆಂಗಳೂರು ದಕ್ಷಿಣ: ಜಯನಗರಕ್ಕೆ ಶೀಘ್ರದಲ್ಲೇ ಪೈಪ್‌ಲೈನ್ ಅನಿಲ ಲಭ್ಯ; ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸೆಪ್ಟೆಂಬರ್ 28ರಂದು ಸಂಜೆ 4 ಗಂಟೆಗೆ ಜೆ.ಪಿ. ನಗರ 1ನೇ ಹಂತದಲ್ಲಿರುವ ಎಸ್‌ಬಿಐ ಕಾಲೋನಿಯಲ್ಲಿ ಪೈಪ್ ಲೈನ್ ಅನಿಲ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಎನ್‌ಜಿಯ ಆರ್ಥಿಕ ಪ್ರಯೋಜನಗಳನ್ನು ವಿವರಿಸಿದ ಸಂಸದ ಸೂರ್ಯ ಅವರು, ಕುಟುಂಬಗಳು ಪ್ರತಿ ಸಿಲಿಂಡರ್ ಮೇಲೆ ಸರಾಸರಿ 200 ರಿಂದ 300 ರೂ ಉಳಿತಾಯವನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.ಅಲ್ಲದೆ, ಪಿಎನ್‌ಜಿ ಸಾಂಪ್ರದಾಯಿಕ ಎಲ್‌ಪಿಜಿಗಿಂತ ಹೆಚ್ಚು ಸುರಕ್ಷಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಬೆಂಗಳೂರಿನಲ್ಲಿ ಶೇ. 100ರಷ್ಟು ಪಿಎನ್‌ಜಿ ವ್ಯಾಪ್ತಿಯನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.