ನಂಜನಗೂಡು: ಸುತ್ತೂರು ಗ್ರಾಮದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯಿಂದ ಗ್ರಾಮೀಣ ಶೈಲಿಯಲ್ಲಿ ಎತ್ತಿನಗಾಡಿ ಏರಿ ಮತದಾನ ಜಾಗೃತಿ ಕಾರ್ಯಕ್ರಮ
ನಂಜನಗೂಡು: ಚಾಮರಾಜನಗರ ಲೋಕ ಸಭಾ ಚುನಾವಣೆ ಹಿನ್ನೆಲೆ ಮತದಾನ ಪ್ರಮಾಣವನ್ನು ಹೆಚ್ಚುಸುವ ನಿಟ್ಟಿನಲ್ಲಿ ನಂಜನಗೂಡು ತಾಲ್ಲೂಕು ಪಂಚಾಯಿತಿಯ ಸ್ವೀಪ್ ಸಮಿತಿ ವತಿಯಿಂದ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಗ್ರಾಮೀಣ ಸೊಗಡಿನ ಶೈಲಿನಲ್ಲಿ ಎತ್ತಿನಗಾಡಿ ಜಾಥಾ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ. ಇಂದು ಶನಿವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರ ಮಾರ್ಗದರ್ಶನದಂತೆ, ಬಿಳಿಗೆರೆ ಹೋಬಳಿ ಮಟ್ಟದಲ್ಲಿ ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳಿಂದ ಸುತ್ತೂರು ಗ್ರಾಮದಲ್ಲಿ ಎತ್ತಿನ ಗಾಡಿ ಏರಿ ಮತದಾನ ಜಾಗೃತಿ ಮೂಡಿಸಿದರು.