ಸಿರಗುಪ್ಪ: ನಗರದಲ್ಲಿ ಆಟೋ ಕೊಡಿಸುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು
ಬ್ಯಾಟರಿ ರೀಚಾರ್ಜ್ ಮಾಡುವ ಉಪಕರಣ ಹಾಗೂ ಆಟೋರಿಕ್ಷಾ ಕೊಡಿಸುವುದಾಗಿ ನಂಬಿಸಿ ಈ 5 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಅದೋನಿ ರಸ್ತೆಯ ರೇಣುಕಾ ಆಟೋಮೋಬೈಲ್ ಅಂಗಡಿ ಮಾಲೀಕ ಕೆ.ಪಿ. ವಿಜಯ ತಮಗೆ ಬೇಕಾದ ಬ್ಯಾಟರಿ ರೀಚಾರ್ಜ್ ಮಾಡುವ 4 ಉಪಕರಣಗಳು ಹಾಗೂ ಆಟೋ ಬೇಕೆಂದು ಶಿವಮೊಗ್ಗ ಜಿಲ್ಲೆಯ ಹೊನ್ನಾರಳ್ಳಿಯ ವಿಜಯಕುಮಾರ್ಬಿ. ಮೂಲಕ ಬೆಂಗಳೂರಿನ ಬನಶ್ರೀ ನವೀಕರಿಸಬಹುದಾದ ಇಂಧನ ವ್ಯವಸ್ಥೆ ಪ್ರೈ ಲಿಮಿಟೆಡ್ ಮಾಲೀಕ ಚಂದ್ರಮೋಹನ್ ಉಮಾಪತಿ ಅವರಿಗೆ ಸಂಪರ್ಕಿಸಿ ವಿಚಾರಿಸಿದ್ದಾರೆ. ಬ್ಯಾಟರಿ ರೀಚಾರ್ಜ್ ಮಾಡುವ 4 ಉಪಕರಣಗಳಿಗೆ ₹ 3.20 ಲಕ್ಷ ಹಾಗೂ ಬ್ಯಾಟರಿ ಆಟೋಗೆ ₹1.80 ಲಕ್ಷ ಒಟ್ಟು ₹5 ಲಕ್ಷ ಮೊತ್ತವನ್ನು ಸುಕೋ ಬ್ಯಾಂಕಿನ ವ್ಯವಸ್ಥಾಪಕ ಮರಿಸ್ವಾಮಿ ಬ್ಯಾಂಕಿನ ಮೂಲಕ ಸಾಲ ನೀಡಿ ಬೆಂಗಳೂರಿನ ಬನಶ್ರೀ ನವೀಕರಿಸಬಹುದ