ಹೊಸಕೋಟೆ: ನಗರದಲ್ಲಿ 1 ಕೋಟಿ ವ್ಯಚ್ಚದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದ ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ 256 ಫಲಾನುಭವಿಗಳಿಗೆ 1 ಕೋಟಿ ರೂ. ವೆಚ್ಚದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಶರತ್ ಬಚ್ವೇಗೌಡ ತಾಲೂಕಿನ ಅಧಿಕಾರಿಗಳೊಂದಿಗೆ ಗಣ್ಯರೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.ಹೊಸಕೋಟೆ ತಾಲ್ಲೂಕು ಪಂಚಾಯ್ತಿಯ 11 ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಕೈಗಾರಿಕಾ ಇಲಾಖೆಯ 150 ಫಲಾನುಭವಿಗಳಿಗೆ ಕಾರ್ಮಿಕ ಕಿಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 50 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್, ತೋಟಗಾರಿಕೆ ಇಲಾಖೆಯ 25 ಫಲಾನುಭವಿಗಳಿಗೆ ಸೀಡ್ ಕಿಟ್, ರೇಷ್ಮೆ ಇಲಾಖೆಯ 16 ಫಲಾನುಭವಿಗಳಿಗೆ ಡ್ರಿಪ್ ಮತ್ತು ಸೋಂಕು ನಿವಾರಕ ಆರ್‌ಹೆಚ್, ಕೃಷಿ ಇಲಾಖೆಯ 4 ಫಲಾನುಭವಿಗಳಿಗೆ ಮ್ಯಾಟ್‌ಗಳನ್ನು ವಿತರಿಸಿದರು.