ನರಗುಂದ: ಕೊಣ್ಣೂರು ಹಾಗೂ ಶಿರೋಳ ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ ಸಿಇಒ ಭೇಟಿ, ನರೇಗಾ ಕಾಮಗಾರಿಗಳ ಪರಿಶೀಲನೆ
Nargund, Gadag | Nov 5, 2024 ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಇಂದು ನರಗುಂದ ತಾಲೂಕಿನ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದರು. ಹುಣಶೀಕಟ್ಟಿ, ಕೊಣ್ಣೂರು ಮತ್ತು ಶಿರೋಳ ಗ್ರಾಪಂ ಗಳಿಗೆ ಭೇಟಿ ನೀಡಿದ ಭರತ್ ಎಸ್ ಅವರು ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು. ಹುಣಶೀಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಮತ್ತು ಪಿಆರ್.ಇಡಿ ಇಲಾಖೆ ಒಗ್ಗೂಡುವಿಕೆಯಡಿ 1.33 ಲಕ್ಷ ವೆಚ್ಚದಡಿ ನಿರ್ಮಿಸುತ್ತಿರುವ ಶಾಲಾ ಶೌಚಾಲಯದ ಕಾಮಗಾರಿ, ಕೊಣ್ಣೂರು ಗ್ರಾಪಂ ನಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಗಟಾರ ಮತ್ತು ಸಿ.ಸಿ.ರಸ್ತೆ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.