ಯಲ್ಲಾಪುರ: ಜೋಡುಕೆರೆಯಲ್ಲಿ ಮೊಸಳೆ ಬಂದದ್ದಾದ್ರು ಹೇಗೆ
ಯಲ್ಲಾಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಜೋಡುಕೆರೆಯಲ್ಲಿ ಕಳೆದೆರಡು ವಾರದಿಂದ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಳ್ಳುತ್ತಿದೆ. ಮೊಸಳೆಯನ್ನು ಕುತೂಹಲದಿಂದ ವೀಕ್ಷಿಸಲು ಬರುವವರ ಸಂಖ್ಯೆ ಹೆಚ್ಚಾಗುತ್ತಿರುವದರಿಂದ ಆಕರ್ಷಣೆ ತಾಣವೆನಿಸಿದರೂ ಅಪಾಯವೂ ಇದೆ.ಯಲ್ಲಾಪುರದಲ್ಲಿ ಯಾವದೇ ಕೆರೆಯಲ್ಲಿಯೂ ನಿರ್ಭಯವಾಗಿ ಇಳಿಯಬಹುದಾಗಿತ್ತು.ಆದರೆ ಜೋಡುಕೆರೆ ಯಲ್ಲಿ ಇದ್ದಕ್ಕಿದ್ದಂತೆ ಮೊಸಳೆ ಕಾಣಿಸಿಕೊಂಡಿದ್ದಾದರೂ ಹೇಗೆ ಎಲ್ಲಿಂದ ಬಂದಿದೆ ಅಥವಾ ಯಾರಾದ್ರೂ ತಂದು ಬಿಟ್ಟಿದ್ದಾರೆಯೇ ಎಂಬ ಉಹಾಪೋಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.ಇದೀಗ ಅದು ಎಲ್ಲಿಂದ ಬಂದಿದೆ, ಯಾರಾದರೂ ತಂದು ಕೆರೆಯಲ್ಲಿ ಬಿಟ್ಟಿದ್ದಾರೆಯೇ ಎಂಬ ಉಹಾಪೋಹಕ್ಕೆ ಇಂಬು ಕೊಡುವಂತೆ ಸ್ಥಳೀಯರಿಂದ ಸ್ಫೋಟಕ ಮಾಹಿತಿ ಲಭ್ಯವಾಗಿದೆ.