ಶಹಾಬಾದ: ಸ್ವಗ್ರಾಮದಲ್ಲಿಯೇ ಚೌಡಯ್ಯ ಮೂರ್ತಿ ವಿರೂಪಗೊಳಿಸಿ ದ್ವೇಷದ ಕಿಡಿ ಹೊತ್ತಿಸಿದ ಮುತ್ತಗಾ ಗ್ರಾಮದ ಮೂವರ ಬಂಧನ
ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ ಘಟನೆ ಹಿನ್ನೆಲೆಯಲ್ಲಿ ಶಹಾಬಾದ ನಗರ ಪೊಲೀಸರು ಕೇವಲ ಐದು ದಿನಗಳಲ್ಲಿ ಮೂವರು ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೀವಣಗಿ ಗ್ರಾಮದ ಮಲ್ಲಿಕಾರ್ಜುನ ಪಾಟೀಲ ಹಾಗೂ ಮುತ್ತಗಾ ಗ್ರಾಮದವರೆ ಆದ ಸಾಬಣ್ಣ ಪಟ್ಟೆದಾರ, ಶಿವರಾಜ ನಾಟಿಕಾರ ಬಂಧಿತ ಆರೋಪಿಗಳು ಎಂದು ಶುಕ್ರವಾರ 4 ಗಂಟೆಗೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಘಟನೆ ವೇಳೆ ಬಳಸಿದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಸ್ವ ಗ್ರಾಮದಲ್ಲಿಯೇ ಮೂರ್ತಿ ವಿರೂಪಗೊಳಿಸಿ ದ್ವೇಷದ ಕಿಡಿ ಹಬ್ಬಿಸಿದ್ದರು