ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಡಾ. ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಚನ ಪಿತಾಮಹ ಡಾ ಪಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನ್ಮದಿನಾಚರಣೆಯನ್ನು ಇಂದು ಮಂಗಳವಾರ ಬೆಳಗ್ಗೆ 11:30 ಗಂಟೆಯಲ್ಲಿ ಅರ್ಥಪೂರ್ಣ ಬಗ್ಗೆ ಆಚರಣೆ ಮಾಡಲಾಯಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಚನ ಪಿತಾಮಹರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಅವರು ಮಾತನಾಡಿ ವಚನ ಪಿತಾಮಹ ಡಾಕ್ಟರ್ ಪಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಶರಣರ ನಾಡಿನಲ್ಲಿ ವಚನ ಸಾಹಿತ್ಯವನ್ನು ಬೆಳೆಸಿದವರಾಗಿದ್ದರು ಎಂದು ಅವರ ಬಗ್ಗೆ ಗುಣಗಾನ ಮಾಡಿದರು