ಕಲಬುರಗಿ ಅಫಜಲಪುರ ನಡುವಿನ ಹಾರುತಿ ಹಡಗಿಲ್ ಬಳಿ ನಿನ್ನೆ ಗುರುವಾರ ಸಂಜೆ ಸಾರಿಗೆ ಬಸ್ ಮತ್ತು ಜೀಪ್ ನಡುವೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ತೆಲ್ಲೂಣಗಿ ಗ್ರಾಮದ ಚಂದ್ರಕಾಂತ ಚಿತ್ಪುರ ಹಾಗೂ ಸುಲೋಚನಾ ಚಿತ್ಪುರ ದಂಪತಿ ಹಾಗೂ ಜೀಪ್ ಚಾಲಕ ಮಿಟ್ಟು ಸಾಬ್ ಪಟೇಲ್ ಅಂತ್ಯಕ್ರಿಯೆ ಗ್ರಾಮದಲ್ಲಿ ನಡೆಯಿತು. ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು. ಸರ್ಕಾರದಿಂದ ದೊರಕುವ ಪರಿಹಾರ ನೆರೆಯನ್ನು ಶೀಘ್ರ ಒದಗಿಸಲು ಅಧಿಕಾರಿಗಳಿಗೆ ಸೂಚಿಸುವದಾಗಿ ಭರವಸೆ ನೀಡಿದರು.