ಹುನಗುಂದ: ಚಿತ್ತವಾಡಗಿ ಗ್ರಾಮದ ೨೦ ಕ್ಕೂ ಹೆಚ್ಚು ಯುವಕರು ಕರವೇಗೆ ಸೇರ್ಪಡೆ
ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಗೆ ಹುನಗುಂದ ತಾಲೂಕಿನ ಚಿತ್ತವಾಡಗಿ ಗ್ರಾಮದ ೨೦ ಕ್ಕೂ ಹೆಚ್ಚು ಯುವಕರು ಅ.೨೭ ಮಧ್ಯಾಹ್ನ ೩ ಗಂಟೆಗೆ ಸೇರ್ಪಡೆಯಾದರು. ಹುನಗುಂದ ತಾಲೂಕಾ ಕರವೇ ಅಧ್ಯಕ್ಷ ಶರಣು ಗಾಣಿಗೇರ ಸೇರ್ಪಡೆಗೊಂಡ ಯುವಕರಿಗೆ ಕರವೇ ಶಾಲು ಹೊದಿಸಿ ಸ್ವಾಗತಿಸಿಕೊಂಡರು.