ಜಗಳೂರು: ಕೊಡದಗುಡ್ಡ ಗ್ರಾಮದ ವೀರಭದ್ರಸ್ವಾಮಿ ಹೆಸರಿನಲ್ಲಿ ವಸತಿಗೃಹ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಂಕು ಸ್ಥಾಪನೆ
ಜಗಳೂರು ತಾಲ್ಲೂಕು ಸುಕ್ಷೇತ್ರ ಕೊಡದಗುಡ್ಡದಲ್ಲಿ ನಡೆದ ವೀರಭದ್ರಸ್ವಾಮಿ ಹೆಸರಿನಲ್ಲಿ ನಿರ್ಮಿಸಲಾದ ವಸತಿಗೃಹ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಂಕುಸ್ಥಾಪನೆ, ದೇವಿಕೆರೆ ಗ್ರಾಮದಲ್ಲಿನ ಮಹದ್ವಾರದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು. ರಂಭಾಪುರಿ ಜಗದ್ಗುರುಗಳು ಹಾಗೂ ಹಿಮಾವತ್ ಕೇದಾರ ಜಗದ್ಗುರುಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ಮಾಡಲಾಯಿತು. ಈ ವೇಳೆ, ಶಾಸಕ ಬಿ.ದೇವೇಂದ್ರಪ್ಪ ಭಾಗವಹಿಸಿ ಆಶೀರ್ವಚನ ಪಡೆದು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಗ್ರಾಮದ ಹಿರಿಯ ಮುಖಂಡರು, ಗ್ರಾಮಸ್ಥರು, ಭಕ್ತರು ಇದ್ದರು.