ಧೂಮ್ ಮಚಾಲೇ ಧೂಮ್ ಮಚಾಲೇ ಧೂಮ್ ಎಂದು ಹಾಡುವುದರ ಜೊತೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಇಡೀ ಯುವ ಸಮೂಹಕ್ಕೆ ಕಿಚ್ಚು ಹಚ್ಚಿದ ಸುನಿಧಿ. ನಗರದ ಹೊರವಲಯದ ಉತ್ತನಹಳ್ಳಿ ಜ್ವಾಲಾಮುಖಿ ದೇವಸ್ಥಾನದ ಬಳಿ ಆಯೋಜಿಸಿರುವ ಯುವ ದಸರಾ ಕಾರ್ಯಕ್ರಮದ ಕೊನೆಯ ದಿನವಾದ ಶನಿವಾರ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಗಾಯನಕ್ಕೆ ಸಂಗೀತ ಪ್ರಿಯರು ಕುಣಿದು ಕುಪ್ಪಳಿಸಿದರು.