ಬಳ್ಳಾರಿ: ಜೀನ್ಸ್ ಪಾರ್ಕ್ಗೆ 2026 ಜನವರಿಯಲ್ಲಿ
ಭೂಮಿ ಪೂಜೆ: ನಗರದಲ್ಲಿ ಶಾಸಕ ನಾರಾ ಭರತ್ ರೆಡ್ಡಿ
ಜೀನ್ಸ್ ಪಾರ್ಕ್ ಗೆ 2026 ರ ಮೊದಲ ತಿಂಗಳಲ್ಲಿ ಭೂಮಿ ಪೂಜೆ ಪೂಜೆ ಮಾಡಲಿದೆಂದು ನಗರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್ ನಲ್ಲಿ ಗುರುವಾರ ಮಧ್ಯಾಹ್ನ 1ಗಂಟೆಗೆ ಸುದ್ದಿಗೋಷ್ಟಿ ನಡೆಸಿದ ಅವರು. ಜೀನ್ಸ್ ಪಾರ್ಕ್ ನಲ್ಲಿ ಘಟಕಗಳನ್ನು ಆರಂಭಿಸುವವರಿಗೆ ಶೆ.25 ರಿಯಾಯಿತಿಯಲ್ಲಿ ನಿವೇಶನ ನೀಡಲಿದೆಂದರು. ನಗರದ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣ ಘಟಕ ಹೊಂದಿರುವ ಜೀನ್ಸ್ ವಾಸಿಂಗ್ ಘಟಕಗಳು ತಕ್ಷಣ ಕಾರ್ಯನಿರ್ವಹಿಸಲು ಅನುಮತಿ ನೀಡಿದೆಂದರು. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಬಯಕೆಯಂತೆ ಸಂಜೀವರಾಯನಕೋಟೆ ಬಳಿ 600 ಎಕರೆ ಪ್ರದೇಶದಲ್ಲಿ ದೇಶದಲ್ಲಿಯೇ ಗಮನ ಸೆಳೆಯುವ ಜೀನ್ಸ್ ಪಾರ್ಕ್ ನಿರ್ಮಿಸಲಿದೆ. ಅಲ್ಲಿ ಘಟಕಗಳನ್ನು ಆರಂಭಿಸಲು ಶಾಸಕ ನಾಗೇ